ನೃಪತುಂಗ ಸಾಹಿತ್ಯ ಪ್ರಶಸ್ತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಸ್ಥಾಪಿಸಿರುವ ಪ್ರಶಸ್ತಿಯಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ದವಾದ ಹಾಗೂ ಮೌಲಿಕವಾದ ಕೊಡುಗೆ ನೀಡಿದ ಬರಹಗಾರರೊಬ್ಬರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಶಸ್ತಿಯನ್ನು ಯಾವುದೇ ಕೃತಿಗೆ ನೀಡದೆ, ವ್ಯಕ್ತಿಯ ಸಮಗ್ರ ಕೊಡುಗೆಯನ್ನು ಪರಿಗಣಿಸಲಾಗುತ್ತದೆ. == ಪ್ರಶಸ್ತಿ == ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಕನ್ನಡದ ಶ್ರೇಷ್ಠ ವಿದ್ವಾಂಸರು, ಕನ್ನಡಪರ ಹೋರಾಟಗಾರರಿಗೆ ನೀಡಲಾಗುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಸಾಪದಲ್ಲಿರಿಸಿರುವ 1.5 ಕೋಟಿ ರೂ. ದತ್ತಿಯ ಮೂಲಕ ಕನ್ನಡದ ಗಣ್ಯ ಸಾಧಕರಿಗೆ ನೃಪತುಂಗ ಪ್ರಶಸ್ತಿಯನ್ನು ಪ್ರದಾನ ಮಾಡುವುದು.[೧] ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೊಡುವ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಭಾಜನರು: ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ (2015) ವಿದ್ವಾಂಸ ಡಾ.ಟಿ. ವಿ. ವೆಂಕಟಾಚಲ ಶಾಸ್ತ್ರಿ ಅವರು ಆಯ್ಕೆಯಾಗಿದ್ದಾರೆ. 2016 ರ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಭಾಜನರಾಗಿದ್ದಾರೆ. == ಇದುವರೆಗೆ ಪ್ರಶಸ್ತಿ ಪಡೆದವರು == ನಾಡೋಜ ಡಾ ದೇ. ಜವರೇಗೌಡ - ೨೦೦೭ ನಾಡೋಜ ಡಾ. ಪಾಟೀಲಪುಟ್ಟಪ್ಪ - ೨೦೦೮ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ - ೨೦೦೯ ಡಾ. ಸಿ.ಪಿ. ಕೃಷ್ಣಕುಮಾರ್ - ೨೦೧೦ ಡಾ. ಎಂ.ಎಂ. ಕಲಬುರ್ಗಿ - ೨೦೧೧ ಡಾ. ಸಾರಾ ಅಬೂಬಕರ್ - ೨೦೧೨ ಬರಗೂರು ರಾಮಚಂದ್ರಪ್ಪ - 2013 ಕುಂ.ವೀರಭದ್ರಪ್ಪ - 2014 ಟಿ. ವಿ. ವೆಂಕಟಾಚಲ ಶಾಸ್ತ್ರಿ - 2015 ಚಿದಾನಂದ ಮೂರ್ತಿ - 2016 ಎಸ್.ಎಲ್.ಭೈರಪ್ಪ - 2017 ಸಿದ್ದಲಿಂಗಯ್ಯ -2018 ಚನ್ನವೀರ ಕಣವಿ - 2019 ಜಿ. ಎಸ್. ಆಮೂರ -2020 ಜಿ ವೆಂಕಟೇಶ್ - 2021 == ನೋಡಿ == ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016 ಕರ್ನಾಟಕ ರಾಜ್ಯ ಪ್ರಶಸ್ತಿಗಳು == ಉಲ್ಲೇಖ & ಬಾಹ್ಯಕೊಂಡಿಗಳು ==